Vijay TVK Party: ದಳಪತಿ ಜೋಸೆಫ್ ವಿಜಯ್ ನೇತೃತ್ವದ ಟಿ.ವಿ.ಕೆ (ತಮಿಳಗ ವೆಟ್ರಿ ಕಳಗಂ) ಸರ್ಕಾರವು ತನ್ನ ಮೊದಲ ಆಡಳಿತಾತ್ಮಕ ಅವಧಿಯಲ್ಲೇ ಅತ್ಯಂತ ಐತಿಹಾಸಿಕ ತೀರ್ಮಾನವೊಂದನ್ನು ತೆಗೆದುಕೊಳ್ಳಲು ಸಜ್ಜಾಗಿದೆ ಎಂದು ಕೆಲ ಮೂಲಗಳಿಂದ ಕೇಳಿ ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಚುನಾವಣಾ ಕಣದಲ್ಲಿ ತಮಗೆ ಅಭೂತಪೂರ್ವವಾಗಿ ಬೆಂಬಲಿಸಿ, ಗೆಲುವಿನ ಮಾಲೆ ತೊಡಿಸಿದ ಕೋಟ್ಯಂತರ ನಾರಿಯರಿಗೆ ದಳಪತಿ ವಿಜಯ್ ಅವರು ಬಿಗ್ ‘ರಿಟರ್ನ್ ಗಿಫ್ಟ್’ ನೀಡಲು ಸದ್ದಿಲ್ಲದೆ ಸ್ಕೆಚ್ ಹಾಕಿದ್ದಾರೆ. ದೇಶದ ಕಾನೂನು ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಲು ಸಂಪೂರ್ಣ ಮಹಿಳಾ ವಕೀಲರ ಸೇನೆಯನ್ನೇ ಕಣಕ್ಕಿಳಿಸಲು ವಿಜಯ್ ಸರ್ಕಾರ ಸಜ್ಜಾಗಿದೆ! ಪ್ರತಿಷ್ಠಿತ ‘ಬಾರ್ ಆಂಡ್ ಬೆಂಚ್’ ಬಿಚ್ಚಿಟ್ಟಿರುವ ಈ ರಹಸ್ಯ ಈಗ ಇಡೀ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಇದನ್ನೂ ಓದಿ:
Tamil Nadu Politics: ವಿಜಯ್ ನೇತೃತ್ವದ ಟಿವಿಕೆಯಲ್ಲಿ ಶಾಸಕಿಯಾಗಿ ಗೆದ್ದ ಕೀರ್ತನಾಗೆ ಬಿಗ್ ಜಾಕ್‌ಪಾಟ್! ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ದಾರಿ ನೀಡಿದ ದಳಪತಿ!
ಯಾವುದು ಗೊತ್ತಾ ಆ ದಾಖಲೆ!
ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಲು ಸಂಪೂರ್ಣ ಮಹಿಳಾ ವಕೀಲರ ತಂಡವನ್ನು ನೇಮಿಸಲು ವಿಜಯ್ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ವಲಯದ ಮಾಧ್ಯಮ ಸಂಸ್ಥೆ ‘ಬಾರ್ ಆಂಡ್ ಬೆಂಚ್’ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ. ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಮತ್ತು ಸ್ಟ್ಯಾಂಡಿಂಗ್ ಕೌನ್ಸೆಲ್‌ಗಳಾಗಿ ಕೇವಲ ಮಹಿಳಾ ವಕೀಲರನ್ನೇ ನೇಮಕ ಮಾಡುವ ಮೂಲಕ ತಮಿಳುನಾಡು ದೇಶದಲ್ಲೇ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ.
ನಾರಿಯರಿಗೆ ದಳಪತಿಯ ‘ರಿಟರ್ನ್ ಗಿಫ್ಟ್’?
ರಾಜಕೀಯ ವಿಶ್ಲೇಷಕರ ಪ್ರಕಾರ, ಮುಖ್ಯಮಂತ್ರಿ ವಿಜಯ್ ಅವರ ಈ ನಡೆ ಕೇವಲ ಆಡಳಿತಾತ್ಮಕ ತೀರ್ಮಾನವಲ್ಲ; ಬದಲಿಗೆ ಇದು ತಮಗೆ ಬೆಂಬಲ ನೀಡಿದ ಮಹಿಳಾ ಮತದಾರರಿಗೆ ನೀಡಿದ ‘ರಿಟರ್ನ್ ಗಿಫ್ಟ್’. 2026ರ ಚುನಾವಣೆಯಲ್ಲಿ ತಮಿಳುನಾಡಿನ ಮಹಿಳೆಯರು ಮತ್ತು ಯುವ ವೋಟರ್ಸ್ ಹೊಸ ಪಕ್ಷವಾದ ಟಿ.ವಿ.ಕೆಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದರು. ಆಡಳಿತ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ನಾರಿಯರ ಪ್ರಾತಿನಿಧ್ಯ ಹೆಚ್ಚಿಸಲು ವಿಜಯ್ ಅವರು ಈ ಮಾಸ್ಟರ್ ಸ್ಟೋಕ್ ನೀಡಿದ್ದು, ಮಹಿಳಾ ಸಬಲೀಕರಣಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂಬ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.
ಆಡಳಿತ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ನಾರಿಯರ ಪ್ರಾತಿನಿಧ್ಯ ಹೆಚ್ಚಿಸಲು ವಿಜಯ್ ಅವರು ಈ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ಮಹಿಳಾ ಸಬಲೀಕರಣಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂಬ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಈ ಐತಿಹಾಸಿಕ ಹೆಜ್ಜೆಯು ದೇಶದ ಒಟ್ಟಾರೆ ಕಾನೂನು ವ್ಯವಸ್ಥೆಯಲ್ಲಿ ಮಹಿಳೆಯರ ಒಳಗೊಳ್ಳುವಿಕೆಗೆ ಹೊಸ ದಿಕ್ಕೂಚಿಯಾಗುವ ಮುನ್ಸೂಚನೆ ನೀಡಿದೆ.